ಭಾರತದ ಪ್ರಜ್ಞೆಯನ್ನು ಬಹಳ ಕಾಲ ಕಾಡುವ ವೇಮುಲ

campaign english new-page-001– ರೋಶಿನಿ ಇನ್ಛೆಂಟೀನಾ (Roshini Infenteena)
ದ್ವೀತಿಯ .ಬಿ.ಕಾಂ (II B.Com)

ಮಾನವನ ಹುಟ್ಟು ಒಂದು ವಿಶೇಷವಾದ ವರದಾನ ಹುಟ್ಟಿದ ಮನುಷ್ಯ ಕೆಲವು ದಿನ ಭೂಮಿ ಮೇಲೆ ಇದ್ದು ಏನಾದರೂ ಸಾಧಿಸಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಪ್ರತಿಯೊಬ್ಬರಲ್ಲೂ ಗುರಿ ಎಂಬುದು ಇರಬೇಕು.ಆ ಗುರಿಯನ್ನು ಸಾಧಿಸಲು ಮನುಷ್ಯ ಏನೆಲ್ಲ ಕಷ್ಟಪಡಬೇಕು ಎಂಥೆಂಥ ತೊಂದರೆಗಳನ್ನು ಎದುರಿಸಬೇಕು ಎಂಬುವುದಕ್ಕೆ ಆಂದ್ರ ಪ್ರದೇಶದ ಗುಂಟೂರು ತಾಲ್ಲೂಕಿನ ರೊಹಿತ್ ವೇಮುಲ ಎಂಬ ಯುವಕನ ಆತ್ಮಹತ್ಯೆಯೇ ಉದಾಹರಣೆಯಾಗಿದೆ.

ರೋಹಿತ್ ವೇಮುಲನು ಜನವರಿ 30 ರಂದು 1989 ರಂದು ಆಂದ್ರ ಪ್ರದೇಶದ ಗುಂಟೂರು ತಾಲ್ಲೂಕಿನಲ್ಲಿ ಜನಿಸಿದನು. ಈತನ ತಂದೆ ಮಣಿಕುಮಾರ್ ತಾಯಿ ರಾಧಿಕಾ.ಈತನು ದಲಿತ ಜಾತಿಗೆ ಸೇರಿದವನಾಗಿದ್ದನು. ಪ್ರತಿಯೊಬ್ಬರ ಹುಟ್ಟು ಆಕಸ್ಮಿಕ ಆದರೆ ತನ್ನ ಹುಟ್ಟು ಮಾರಣಾಂತಿಕ ಅವಘಡ ಎಂದು ಬರೆದಿಟ್ಟು ನೇಣು ಹಾಕಿಕೊಂಡ ರೋಹಿತ್ ವೇಮುಲ ಮಾತ್ರ ಭಾರತದ ಪ್ರಜ್ಞೆಯನ್ನು ಬಹಳ ಕಾಲ ಕಾಡುತ್ತಾನೆ. ಮರಣ ದಂಡೆನೆಯಂತಹ ಘೋರ ಶಿಕ್ಷೆ ಇರಬಾರದು ಎಂದು ಪ್ರತಿಭಟಿಸಿದ್ದ ವೇಮುಲ ಈಗ ತಾನೇ ನೇಣಿನ ಕುಣಿಕೆಗೆ ತಲೆ ಒಡ್ಡಿದ.ತನ್ನ ಸುತ್ತಲ ವ್ಯವಸ್ಥೆಯ ತಪ್ಪಿಗೆ ತನಗೆ ತಾನೇ ಶಿಕ್ಷೆ ವಿಧಿಸಿಕೊಂಡದನ್ನು ಕಂಡು ನನಗೆ ಬೇಸರವಾಗುತ್ತಿದೆ. ಪ್ರತಿಭಾವಂತ ವಿಧ್ಯಾರ್ಥಿಯಾದ ರೋಹಿತ್ ಮತ್ತು ಗೆಳೆಯರು ವಿಧ್ಯಾರ್ಥಿ ವೇತನ ಪಡೆದು ಸಂಶೋಧನೆಗೆಂದು ವಿ.ವಿಗೆ ಬಂದವರು. ಅವರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ ಅಂತವರಿಗೆ ಇರಲು ಜಾಗ ಕೂಡದೆ ಹೊರಗೆ ನೂಕುವುದು ಘೋರ ಅಪರಾಧ. ನನ್ನ ಪ್ರಕಾರ ಇದು ನ್ಯಾಯವೇ ಅಲ್ಲಾ.
ರೋಹಿತ್ ವೇಮುಲ ಶಿಕ್ಷಣ ಪಡೆಯಲು ಸೇರಿದ ಸಂಸ್ಥೆಯೇ ಅವನ ಆತ್ಮಹತ್ಯೆಗೆ ಕಾರಣ. ಆತ್ಮಹತ್ಯೆಗೀಡಾದ ಹೈದರಬಾದ್ ಕೇಂದ್ರಿಯ ವಿವಿಯ ದಲಿತ ಸಂಶೋಧನಾ ವಿಧ್ಯಾರ್ಥಿ ರೋಹಿತ್ ವೆಮುಲಾ ಹಾಗೂ ಇತರ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವಿವಿಗೆ 6 ಬಾರಿ ಪತ್ರ ಬರೆದಿದ್ದ ವಿಚಾರ ಇದೀಗ ಬಹಿರಂಗವಾಗಿದೆ.

ವಿವಿಯ ಅಂತರಿಕ ವಿಚಾರದಲ್ಲಿ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ಪದೇ ಪದೇ ಒತ್ತಡ ಏರುತ್ತಿದ್ದರು ಎನ್ನುವ ವಿಚಾರವು ಈಗ ಬೆಳಕಿಗೆ ಬಂದಿದ್ದು.ಇಡೀ ಪ್ರಕರಣಕ್ಕೆ ತಿರುವು ನೀಡಿದೆ. ಇದರಿಂದ ಎಚ್ಚರಗೊಂಡ ವಿದ್ಯಾಥರ್ಿ ವಲಯ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ರಾಜೀನಾಮೆಗೆ ಆಗ್ರಹಿಸಿದೆ. ಅಲ್ಲದೇ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು ಕಾಂಗ್ರೆಸ್ ಸಿಪಿಐ ಕೇಂದ್ರ ಸಚಿವರ ತಲೆದಂಡಕ್ಕೆ ಆಗ್ರಹಿಸಿವೆ. ಈ ಆತ್ಮಹತ್ಯೆ ಸಂಬಂದ ದೇಶಾದ್ಯಂತ ವಿಧ್ಯಾರ್ಥಿಗಳು ನಾನಾ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದಾರೆ. 26 ವರ್ಷದ ದಲಿತ ಸಂಶೋಧನಾ ವಿಧ್ಯಾರ್ಥಿ ರೋಹಿತ್ ಸೇರಿದಂತೆ ವಿವಿಯ ಐದು ವಿದ್ಯಾಥರ್ಿಗಳ ಮೇಲೆ ಎಬಿವಿಪಿ ನಾಯಕರೊಬ್ಬರ ಮೇಲೆ ಹಲ್ಲೇ ನಡೆಸಿದ ಆರೋಪ ಹೊರಿಸಲಾಗಿತ್ತು. ಆಗ ಐವರನ್ನೂ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು. ವಿವಿ ವಿಚಾರಣೆ ಬಳಿಕ ರೋಹಿತ್ ಸೇರಿ ಎಲ್ಲರನ್ನು ಆರೋಪ ಮುಕ್ತಗೊಳಿಸಲಾಗಿತ್ತು.

Students of St. Joseph's College of Commerce protesting in solidarity

Students of St. Joseph’s College of Commerce protesting in solidarity

ಆದರೆ ಸಿಕಂದರಬಾದ್ ಬಿ ಜಿ ಪಿ ಸಂಸದ ಹಾಗೂ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದರು. ವಿವಿ ಜಾತಿವಾದಿಗಳ ಉಗ್ರವಾದಿಗಳ ರಾಜಕೀಯದ ಬೀಡಾಗಿದ್ದು ಎಬಿವಿಪಿ ಮುಖಂಡನ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ವಿವಿ ಮೂಕ ಪ್ರೇಕ್ಷಕವಾಗಿದೆ ಎಂದು ಕಳೆದ ಆಗಸ್ಟ್ ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದು ದೂರು ನೀಡಿದ್ದರು. ಆ ಪತ್ರ ಸೋಮವಾರ ಬಹಿರಂಗಗೊಂಡಿತು. ಸಚಿವ ಬಂಡಾರು ಪತ್ರದ ನಂತರ ಸ್ಮೃತಿ ಇರಾನಿ ಸಚಿವೆಯಾಗಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ವಿವಿಯ ಉಪಕುಲಪತಿ ನಡುವಿನ ಈ ಪತ್ರ ವ್ಯವಹಾರ ಹಾಗೂ ರಾಜಕೀಯ ಒತ್ತಡವೇ ದಲಿತ ವಿಧ್ಯಾರ್ಥಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಸಂಗತಿಗಳು ಎಂಬುದು ಈಗ ಪ್ರಕರಣದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಶಿಪಾರಸ್ಸಿನ ಅತಿ ಪ್ರಮುಖ ವ್ಯಕ್ತಿಗೆ ಸಂಬಂಧ ಪಟ್ಟ ಪ್ರಕರಣದ ವಿಷಯ ಎಂದು ಬರೆದ ಪತ್ರದಲ್ಲಿ ಪ್ರಸ್ತಾಪವಾಗಿದೆ. ಅದಾದ ಬಳಿಕ ಸೆ,24 ಅ.6 20 ಹಾಗೂ ನ.19 ರಂದು ಮತ್ತೆ ಮೂರು ಪತ್ರಗಳು ಎಚ್.ಆರ್.ಡಿ ಇಲಾಖೆಯಿಂದ ವಿವಿ ಉಪಕುಲಪತಿಗೆ ರವಾನೆಯಾಗಿವೆ ವಿಚಿತ್ರ ಎಂದರೆ. ಗೂಂಡಾಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದ ಎಬಿವಿಪಿ ಹುಡುಗರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪವರಿಸಿದ್ದರು ಆದರೆ ಅಂತಹದೊಂದು ಹಲ್ಲೆಗೆ ಒಳಗಾದ ವಿಧ್ಯಾರ್ಥಿಯ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು. ಅದೇ ವರದಿ ಆಧರಿಸಿ ವಿ.ವಿ ನೇಮಿಸಿದ್ದ ಮೊದಲ ಸಮಿತಿ ತನ್ನ ನಿಧರ್ಾರ ತಿಳಿಸಿತ್ತು.

ಯಾವ ಶಿಫಾರಸ್ಸುಗಳ ಬಗ್ಗೆಯೂ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ.ಆದರೆ ರೋಹಿತ್ ಮಾತ್ರ ಯಾರನ್ನೂ ದೂಷಿಸಬೇಡಿ ಎಂದು ಸಾವಿಗೆ ಶರಣಾಗಿದ್ದಾನೆ. ಅವನ ಸಾವಿಗೆ ಯಾರನ್ನೇ ಆಗಲಿ ದೂಷಿಸಿ ಇಂದಿನ ಕಾನೂನಿನಡಿ ಆತ್ಮಹತ್ಯೆಗೆ ಪ್ರಚೋದನೆ ಎಂದು ತೀರ್ಪು ಪಡೆಯುವುದು. ಇದು ದೀರ್ಘದ ಪ್ರಕ್ರಿಯೆ ಇರಬಹುದು ಆದರೆ ಒಂದಂತೂ ಸತ್ಯ, ಆತನನ್ನು ಸಾವಿಗೆ ದೂಡಿದ ಈ ದೇಶ. ವ್ಯವಸ್ಥೆ ಶಿಕ್ಷಣ, ಮಧ್ಯಮ ವರ್ಗದ ಮೀಸಲಾತಿ ವಿರೋಧಿ, ದಲಿತ ವಿರೋಧಿ ಆಲೋಚನೆ ಹಾಗೂ ಎಲ್ಲಡೆ ಹೇರಳವಾಗಿ ಹಬ್ಬುತ್ತಿರುವ ಮೇಲ್ವರ್ಗ ಕೇಂದ್ರಿತ ರಾಜಕಾರಣದ ವಿರುದ್ಧ ಎಲ್ಲಾ ಪ್ರಜ್ಞಾವಂತ ಯುವ ಸಮೂಹ ಎಚ್ಚಗೊಳ್ಳಬೇಕಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s